This song has been written for the tune of “Aao na Aao Naa” of Kyun Ho Gaya Na movie read it accordingly to enjoy it…. 😉
ನಿನ್ನ ಕಂಗಳು ಏಕೆ ಕಂಡಾಗಲೇ, ಮನದಂಗಳದಿ ಬೆಳಕಾಗಿದೆ
ನಿನ್ನ ಮಾತು ಇಂಪಾಗಿ ಝೇಂಕರಿಸಿದೆ
ಮನವೀಗ ಗರಿಗೆದರಿದೆ
ಅಂದದ ನಗೆಯನು, ತೋರೆಯಾ ಚೆಲ್ಲೆಯಾ
ಹೂರಾಶಿ ಇರುವಂತ ಹೂದೋಟದೀ, ನಿನ್ನ ಕಂಪೇಕೆ ಬೀರಿದೆ
ಬೆಳದಿಂಗಳೇ ಇರದ ಈ ಗಗನದೀ, ನಿನ್ನ ಮೊಗವೇಕೆ ತೋರಿದೆ
ಈ ಪರಿ ಏತಕೆ, ಕಾರಣವ ಬಲ್ಲೆಯಾ
ಈ ಪರಿ ಏತಕೆ, ಕಾರಣವ ಬಲ್ಲೆಯಾ
ನಿನ್ನ ಸ್ಪರ್ಶ ಹಿತವಾದ ಒಲತಂದಿದೆ
ಮನ ರೋಮಾಂಚನಗೊಂಡಿದೆ
ಹೃದಯದ ಮಾತನು, ನುಡಿವೆಯಾ ತಿಳಿಸೆಯಾ
ಬಾರೆಯಾ ಸನಿಹಕೆ, ಸನಿಹಕೆ ಬಾರೆಯಾ
ಪ್ರತಿ ಘಳಿಗೆ ನಿನ್ನ ಸಂಗವಿರಬಯಸಿದೆ, ಮನಸೇಕೋ ಕಳವಳಿಸಿದೆ
ಈ ವಿರಹ ನಮ್ಮ ನಡುವೆ ಇನ್ನೇತಕೆ, ಓ ನಲ್ಲೆ ಬಾ ಮೆಲ್ಲಗೆ
ಮನಸಿನ ಭಾವನೆ, ತಿಳಿಸಲು ನಾ ಬಂದಿಹೆನು
ತೋಳಿನ ಆಸರೆ, ನೀಡುವೆಯಾ ನನಗಿಂದು
ನಿನ್ನ ನೋಡುವ ತವಕ ಹೆಚ್ಚಾಗಿದೆ
ಒಲವಿನ ಸಿಹಿಯನು, ತಿನಿಸೆಯಾ ಸವಿಸೆಯಾ
ನೀ ಬಳಿಯಲಿ ಬಂದು ನಿಂತಾಗಲೇ, ಏಕೆ ವ್ಯಾಮೋಹ ಅತಿಯಾಗಿದೆ
ನಿನ್ನ ಕಂಗಳು ಏಕೆ ಕಂಡಾಗಲೇ, ಮನದಂಗಳದಿ ಬೆಳಕಾಗಿದೆ
ನಿನ್ನ ಮಾತು ಇಂಪಾಗಿ ಝೇಂಕರಿಸಿದೆ
ಮನವೀಗ ಗರಿಗೆದರಿದೆ
ಅಂದದ ನಗೆಯನು, ಚೆಲ್ಲೆಯಾ ತೋರೆಯಾ
ಬಾರೆಯಾ ಸನಿಹಕೆ, ಸನಿಹಕೆ ಬಾರೆಯಾ
Be the first to comment