This was my first attempt to put my hands on writing lyrics …
The Kannada version of “Beetein Lamhe – ಕಳೆದುಹೋದ ಕ್ಷಣ” ….. sing accordingly to enjoy it 😉
ನೋವಿನಲ್ಲೂ ಸಹ ಅಧರವು ನಲಿದಿವೆ
ಕಳೆದುಹೋದ ಕ್ಷಣ ಒಮ್ಮೆ ನೆನಪಾದೊಡೆ || ೨ ||
ಕ್ಷಣಿಕ ಕಾಲಕ್ಕೆ ಸೀಮಿತವಾದರುನು ಸರಿ
ನಲಿವಿನ ಜೀವನ ಇತ್ತು ನನ್ನ ಬಳಿಯಲಿ || ೨ ||
ದಿನವಿಡೀ ಕಳೆದವು ನಿನ್ನಯ ಮಡಿಲಲಿ
ಇರುಳನು ಕಳೆದೆನು ನಿನ್ನಯ ತೋಳಲಿ
ಇಂದಿಗೂ ಆ ಕ್ಷಣ ಒಮ್ಮೆ ನೆನಪಾದೊಡೆ
ಮನಸಿನ ದುಃಖವು ಒಮ್ಮೆ ಮರೆಸಿ ಹಾಕಿದೆ
ನೋವಿನಲ್ಲೂ ಸಹ ಅಧರವು ನಲಿದಿವೆ
ಕಳೆದುಹೋದ ಕ್ಷಣ ಒಮ್ಮೆ ನೆನಪಾದೊಡೆ
ಎಂಥ ವೇಗಾತಿವೇಗವಿತ್ತು ನನ್ನ ಜೀವನ
ಹೇಳಿ ಕಂಡ ಕಡೆ ಎಲ್ಲ ನಲಿವಿನ ನರ್ತನ || ೨ ||
ಮನಸಿನ ಮಾತನು ಹೇಳಿದಾ ದಿನವೆಯೇ
ಹರಿಯುವ ನದಿಯಲಿ ಕಂಡೆನು ಸ್ಥಬ್ಧತೆ
ಇಂದಿಗೂ ಆ ದಿನ ಒಮ್ಮೆ ನೆನಪಾದೊಡೆ
ಕಳೆದ ಕ್ಷಣವೂ ಮನದಲಿ ಉಕ್ಕಿ ಹರಿದಹಾಗಿದೆ
ನೋವಿನಲ್ಲೂ ಸಹ ಅಧರವು ನಲಿದಿವೆ
ಕಳೆದುಹೋದ ಕ್ಷಣ ಒಮ್ಮೆ ನೆನಪಾದೊಡೆ
ನನ್ನ ಹೆಗಲ ಮೇಲೆ ನಿನ್ನ ತಲೆಯ ಬಾಗಿಸಿ
ನನ್ನ ಎದೆಯ ಒಳಗೆ ನೀನು ನಿನ್ನ ಅಡಗಿಸಿ || ೨ ||
ನನ್ನ ಆಸರೆಯಲಿ ಬಂದೆ ನೀ ನಸುಕಲಿ
ಗಾಜಿನ ಹಾಗೆ ನೀ ಹೊಡೆದೆಯಾ ಮಬ್ಬಲಿ
ಇಂದಿಗೂ ಅಂದಿನ ಕ್ಷಣಗಳು ಕಂಡರೆ
ಮನಸಿನ ಶೂನ್ಯತೆಯನ್ನು ಅಳಿಸಿ ಹಾಕಿದೆ
ನೋವಿನಲ್ಲೂ ಸಹ ಅಧರವು ನಲಿದಿವೆ
ಕಳೆದುಹೋದ ಕ್ಷಣ ಒಮ್ಮೆ ನೆನಪಾದೊಡೆ || ೨ ||
Be the first to comment