ಫೆಮಿನಾ ಸ್ಟೈಲಿಸ್ಟಾ ಸೌತ್ 2020 ರ 6 ನೇ ಆವೃತ್ತಿಯನ್ನು ನಾಗಶ್ರೀ ರಾಮಮೂರ್ತಿ ಗೆದ್ದಿದ್ದಾರೆ

Femina Stylista South 2020 in Bengaluru_6

ಫೆಮಿನಾ ಸ್ಟೈಲಿಸ್ಟಾ ಸೌತ್  2020 ರ 6 ನೇ ಆವೃತ್ತಿ ಬೆಂಗಳೂರಿನಲ್ಲಿ ಗ್ಲಾಮರಸ್ ಗಾಲಾ ನೈಟ್‌ನೊಂದಿಗೆ ಮುಕ್ತಾಯಗೊಂಡಿದೆ

~ ಮಾನ್ಯಾ ಗಿರೀಶ್ ಮತ್ತು ಗೋಮತಿ ರೆಡ್ಡಿ ಅವರನ್ನು ಮೊದಲ ಮತ್ತು ಎರಡನೇ ರನ್ನರ್ಸ್ ಅಪ್ ಎಂದು ಘೋಷಿಸಲಾಯಿತು

ಭಾರತದ ಅನುಭವಿ ಮತ್ತು ವಿಶ್ವಾಸಾರ್ಹ ಮಹಿಳಾ ಬ್ರಾಂಡ್ ಫೆಮಿನಾ ಈ ಭಾಗದ ಭವಿಷ್ಯದ ಮನಮೋಹಕ ಫ್ಯಾಷನಿಸ್ಟರಿಗಾಗಿ ಫೆಮಿನಾ ಸ್ಟೈಲಿಸ್ಟಾ ಸೌತ್‌ನ 6 ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಬ್ರ್ಯಾಂಡ್ ಈಗಾಗಲೇ ನಾರ್ತ್, ವೆಸ್ಟ್, ಸೌತ್ ಸೇರಿದಂತೆ ರಾಷ್ಟ್ರದಾದ್ಯಂತ ತನ್ನ ಯಶಸ್ವಿ ಆವೃತ್ತಿಗಳೊಂದಿಗೆ ಹೆಜ್ಜೆ ಗುರುತನ್ನು ಮೂಡಿಸಿದೆ. ಗಾಲಾ-ನೈಟ್ ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ನಡೆಯಿತು. ತೀರ್ಪುಗಾರರು ಮತ್ತು ಪ್ರೇಕ್ಷಕರ ಮುಂದೆ ದಿವಾಸ್ ಗಳು ಅಪಾರ ಶಕ್ತಿ, ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದರು. ನಾಗಶ್ರೀ ರಾಮಮೂರ್ತಿ ಪ್ರಶಸ್ತಿ ಗೆದ್ದರೆ, ಮಾನ್ಯ ಗಿರೀಶ್ ಮತ್ತು ಗೋಮತಿ ರೆಡ್ಡಿ ಕ್ರಮವಾಗಿ 1 ಮತ್ತು 2 ನೇ ರನ್ನರ್ಸ್ ಅಪ್ ಪ್ರಶಸ್ತಿಗಳನ್ನು ಗೆದ್ದರು.

ಗೌರವಾನ್ವಿತ ತೀರ್ಪುಗಾರರಾಗಿ ಹಿರಿಯ ಮತ್ತು ಬಹುಭಾಷಾ ನಟಿ ಪ್ರಿಯಾಂಕ ಉಪೇಂದ್ರ, ಸಮಾಜ ಸೇವಕಿ ಹಾಗು ಉದ್ಯಮಿ ಸ್ಪೂರ್ತಿ ವಿಶ್ವಾಸ್, ಟಿವಿ ಖ್ಯಾತಿಯ ನಟಿ ಅನುಪಮ ಗೌಡ, ಫೆಮಿನಾ ಮ್ಯಾಗಜಿನ್ ನ ಪ್ರೊಡಕ್ಷನ್ ಸಂಪಾದಕಿ ಶ್ರದ್ಧಾ ಕಾಮದಾರ್, ನ್ಯಾಚುರಲ್ ಸಲೂನ್ ನ ಸಹ ಸಂಸ್ಥಾಪಕ ಕುಮಾರವೇಲ್ ಮತ್ತು ಡಾ.ಜಮುನಾ ಪೈ ಅವರ ಸ್ಕಿನ್ ಲ್ಯಾಬ್‌ನ ರಜತಿ ಕಾಲಿಮುಥನ್ ಪಾಲ್ಗೊಂಡಿದ್ದರು. ಸುಂದರಿಯರನ್ನು ಅವರ ಸೌಂದರ್ಯ ಮತ್ತು ಅವರ ಒಟ್ಟಾರೆ ವ್ಯಕ್ತಿತ್ವ ಮತ್ತು ಬುದ್ಧಿವಂತಿಕೆಯ ಮೇಲೆ ನಿರ್ಣಯಿಸಲಾಯಿತು. ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲಲು ಕಠಿಣ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಮೂಲಕ ಅಭ್ಯರ್ಥಿಗಳು ತಮ್ಮ ಪ್ರತಿಭೆಯನ್ನು  ಮೂರು ಕಠಿಣ ಸುತ್ತುಗಳಲ್ಲಿ ಪ್ರದರ್ಶಿಸಿದರು.

ಫೆಮಿನಾ ನಿಯತಕಾಲಿಕದ ಮುಖ್ಯ ಸಮುದಾಯ ಅಧಿಕಾರಿ ಮತ್ತು ಸಂಪಾದಕ ತಾನ್ಯಾ ಚೈತನ್ಯ ಅವರು, “ಫೆಮಿನಾ ಸ್ಟೈಲಿಸ್ಟಾ ಪ್ರಾರಂಭವಾದಾಗಿನಿಂದ, ತಮ್ಮ ಪ್ರತಿಭೆಯಿಂದ ಯಶಸ್ಸನ್ನು ಸಾಧಿಸುವ ಕನಸು ಕಾಣುವವರಿಗೆ ಸಮಾನ ಅವಕಾಶವನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಫೆಮಿನಾ ಸ್ಟೈಲಿಸ್ಟಾದ 6 ನೇ ಆವೃತ್ತಿಯ ಎಲ್ಲಾ ವಿಜೇತರನ್ನು ನಾನು ಅಭಿನಂದಿಸುತ್ತೇನೆ. ಮಹಿಳೆಯರ ಪ್ರತಿಭೆಯನ್ನು ಅನ್ವೇಷಿಸಲು ಮತ್ತು ಹೆಚ್ಚಿಸಲು ಅವಕಾಶ ನೀಡುವ ಅವಕಾಶಗಳೊಂದಿಗೆ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ” ಎಂದರು.Femina Stylista South 2020 in Bengaluru_2

ಜನಪ್ರಿಯ ಹಾಸ್ಯನಟ ರೂಪನ್ ಪಾಲ್ ತನ್ನ ಉಲ್ಲಾಸ ಮತ್ತು ಹಾಸ್ಯದ ಮೂಲಕ ಅತಿಥಿಗಳನ್ನು ರಂಜಿಸಿದರು. ಸುಂದರ ಮತ್ತು ಬಹು ಪ್ರತಿಭಾನ್ವಿತ ಗಾಯಕ ಸೌಂದರ್ಯ ಜಯಚಂದ್ರನ್ ತಮ್ಮ ಭಾವಪೂರ್ಣ ಮತ್ತು ಸುಮಧುರ ಧ್ವನಿಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಫ್ಯಾಷನ್ ಶೋಗೆ ಪ್ರೇಕ್ಷಕರಿಂದ ಅಪಾರ ಚಪ್ಪಾಳೆ ಮತ್ತು ಮನ್ನಣೆ ದೊರೆಯಿತು.

ಈವೆಂಟ್ ಅನ್ನು 1 – ಗಾರ್ಡನ್ ಸಿಟಿ ಯೂನಿವರ್ಸಿಟಿ, 2 – ನ್ಯಾಚುರಲ್ಸ್ ಸಲೂನ್ ಪ್ರಾಯೋಜಿಸಿತ್ತು. ಅಸೋಸಿಯೇಟ್ ಪ್ರಾಯೋಜಕರಾಗಿ ಸಿಲ್ಕ್ ಮಾರ್ಕ್ ಇಂಡಿಯಾ, ಹಾಸ್ಪಿಟಾಲಿಟಿ ಪಾಲುದಾರರಾಗಿ ರಾಯಲ್ ಆರ್ಕಿಡ್, ಆತ್ಮವಿಶ್ವಾಸ ಪಾಲುದಾರರಾಗಿ ವಿಸ್ಟಾರ್ ಪಾಲ್ಗೊಂಡಿತ್ತು.

Be the first to comment

Leave a Reply

Your email address will not be published.


*


This site uses Akismet to reduce spam. Learn how your comment data is processed.